ನಾನು ಕೆಲಸದಿಂದ ವಜಾ ಆಗಿದ್ದೇನೆ. ಇದರಿಂದ ನನಗೆ ಹತಾಶೆಯಾಗಿದೆ

ನಾನು ಕೆಲಸದಿಂದ ವಜಾ ಆಗಿದ್ದೇನೆ. ಇದರಿಂದ ನನಗೆ ಹತಾಶೆಯಾಗಿದೆ

ಸಂಸ್ಥೆಗಳಲ್ಲಿ ಕೆಲವು ಕಾರಣದಿಂದ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಲಾಗುತ್ತದೆ. ನೀವು ಇತ್ತೀಚಿಗೆ ಉದ್ಯೋಗವನ್ನು ಕಳೆದುಕೊಂಡಿದ್ದರೆ, ನಿಮಗೆ ದುಃಖ, ಹತಾಶೆಯಾಗಬಹುದು ಅಥವಾ ಇದರಿಂದ  ಧೈರ್ಯ ಕುಸಿಯಬಹುದು.

ಸಾಮಾನ್ಯವಾಗಿ ನಾವು ಮಾಡುವ ಉದ್ಯೋಗದಿಂದ ನಮ್ಮನ್ನು ನಾವು ಗುರುತಿಸಿಕೊಳ್ಳುತ್ತೇವೆ. ಹೀಗಿರುವಾಗ, ಉದ್ಯೋಗ ಕಳೆದುಕೊಂಡಾಗ ತುಂಬಾ ಸಂಕಟವಾಗುತ್ತದೆ. ಒಂದು ವೇಳೆ ನೀವು ಇಂತಹ ಸನ್ನಿವೇಶದಲ್ಲಿದ್ದರೆ ಈ ರೀತಿ ಅನುಭವ ಆಗಬಹುದು :

  •  ಇಂತಹ ಆಕಸ್ಮಿಕ ಘಟನೆಯನ್ನು ಎದುರಿಸಲು ಸಿದ್ಧರಿರುವುದಿಲ್ಲ.
  • ಏನು ಮಾಡಬೇಕು ಎಂದು ಗೊತ್ತಾಗುವುದಿಲ್ಲ.
  • ಜವಾಬ್ದಾರಿ ಮತ್ತು ಭವಿಷ್ಯದ ಬಗ್ಗೆ ಆತಂಕವಾಗುತ್ತದೆ.
  • ಈ ವಿಷಯ ಮನೆಯವರಿಗೆ ಹೇಗೆ ಹೇಳುವುದು ಮತ್ತು ಹೊಸ ಕೆಲಸ ಸಿಗುವವರೆಗೂ ಹೇಗೆ ನಿಭಾಯಿಸುವುದು ಎಂಬ ಚಿಂತೆಯಿರುತ್ತದೆ.

ಒತ್ತಡ ಮತ್ತು ಆತಂಕವನ್ನು ನಿಭಾಯಿಸುವ ಬಗೆ:

  • ಇದು  ನಿಮ್ಮ ಜೀವನದ ಸೋಲು ಅಥವಾ ನೀವು ಸರಿಯಾಗಿ ಕೆಲಸ ನಿರ್ವಹಿಸಿಲ್ಲ  ಎಂದು ಭಾವಿಸಬೇಡಿ. ಅನಿರೀಕ್ಷಿತ ಸಂದರ್ಭದಲ್ಲಿ ಹೀಗಾಗುತ್ತದೆ. ಇಂತದ್ದೇ ಕಾರಣ ಎಂದು ಊಹಿಸಲು ಸಾಧ್ಯವಿಲ್ಲ. ಉದಾಹರಣೆಗೆ - ವ್ಯವಹಾರದಲ್ಲಿ ಏರಿಳಿತ, ಆಡಳಿತದ ಬದಲಾವಣೆ, ಮತ್ತಿತರ ಕಾರಣಗಳಿಂದ ಸಂಸ್ಥೆಯು ಈ ನಿರ್ಧಾರವನ್ನು ತೆಗೆದು ಕೊಂಡಿರುತ್ತದೆ.
  • ನಿಮ್ಮ ಸಾಮರ್ಥ್ಯ ಮತ್ತು ಕೌಶಲ್ಯವನ್ನು ಗುರುತಿಸಿ.
  • ಇದು ತಾತ್ಕಾಲಿಕ ಸನ್ನಿವೇಶವಾಗಿರುತ್ತದೆ ಮತ್ತು ಇದೇ ಸೋಲಲ್ಲ. ಆದರೆ ಸಾಕಷ್ಟು ಅವಕಾಶಗಳು ಇವೆ ಎಂಬುದು ನೆನಪಿರಲಿ. ಇದೊಂದು ಘಟನೆಯಿಂದ ನಿಮ್ಮ ಭವಿಷ್ಯದ ಬಗ್ಗೆ ನಿರಾಶೆ ಬೇಡ.
  • ನಿಮ್ಮ ಸಾಮರ್ಥ್ಯ ಮತ್ತು ಜೀವನದ ಇತರ ಅಂಶಗಳನ್ನು ನೆನೆಯಿರಿ. ಕೆಲಸದ ಹೊರತು ಬೇರೆ ಸಂದರ್ಭಗಳನ್ನು ಹೇಗೆ ನಿಭಾಯಿಸಿದ್ದೀರಿ ಎಂದು ನೆನಪು ಮಾಡಿಕೊಳ್ಳಿ. ಇದು ನಿಮ್ಮ ಕುಟುಂಬ, ಸ್ನೇಹಿತರು, ಇತ್ಯಾದಿ ಜೀವನದ ಬಗ್ಗೆ ಸ್ಪಷ್ಟತೆ ನೀಡುತ್ತವೆ.
  • ಇಂತಹ ಸಂದರ್ಭದಲ್ಲಿ, ಹಣಕಾಸಿನ ಸಮಸ್ಯೆ ಮತ್ತು ಅಸಹಾಯಕತೆಯ ವಾತಾವರಣ ಇರುತ್ತದೆ. ನಿಮಗೆ ಮನೆಯವರ ಬೆಂಬಲ ಸಿಗದೇ ಇರಬಹುದು. ನಿಮ್ಮ ಆತ್ಮೀಯ ಸ್ನೇಹಿತರೊಂದಿಗೆ ಮಾತನಾಡಿ. ಇದರಿಂದ  ಸ್ವಲ್ಪ ಸಮಾಧಾನವಾಗಬಹುದು. ಒಂದು ವೇಳೆ ನಿಮ್ಮ ಸ್ಥೈರ್ಯ ಕುಸಿದಿದ್ದರೆ, ಆಪ್ತ ಸಮಾಲೋಚಕರನ್ನು ಭೇಟಿಯಾಗಿ ಅಥವಾ ಸಹಾಯವಾಣಿಗೆ ಕರೆ ಮಾಡಿ.

ಮಾಹಿತಿ ಕೊಡುಗೆ : ಮೌಲಿಕ ಶರ್ಮಾ, ಆಪ್ತ ಸಮಾಲೋಚಕರು, ಬೆಂಗಳೂರು

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org