ಸಹಾಯ ಯಾವಾಗ? ಯಾರಿಗೆ?

ಒಂದು ದೊಡ್ಡ ಕಾರ್ಯಕ್ರಮ ಅಥವಾ ಸನ್ನಿವೇಶ ಬಂದರೆ, ಕೆಲಸ ಮುಗಿಸಲು ಕಡಿಮೆ ಸಮಯ ಇದ್ದರೆ ನಾವೆಲ್ಲರೂ ಆತಂಕ ಪಡುವುದು ಸಹಜ. ನಾವು ಹೆಚ್ಚು ಚುರುಕಾಗಿ ಕೆಲಸ ಮಾಡಲು ಇದು ಅಗತ್ಯ ಕೂಡ. ಆದರೆ ಆತಂಕ ನಮ್ಮ ದಿನನಿತ್ಯದ ಕೆಲಸಕ್ಕೆ ಅಡ್ಡಿ ಮಾಡಿದರೆ? ಕೆಲವರಿಗೆ ಯಾವುದೇ ಕಾರಣ ಇಲ್ಲದಿದ್ದರೂ ಆತಂಕ ಹೆಚ್ಚಾಗಿ, ಕೆಲಸದ ಮೇಲಿನ ಗಮನ ಕಡಿಮೆಯಾಗುತ್ತದೆ. ಈ ರೀತಿ ದೈನಂದಿನ ಜೀವನಕ್ಕೆ ಆತಂಕ ಅಡ್ಡಿ ಮಾಡಿದರೆ ಮನೋವೈದ್ಯರನ್ನು ಸಂಪರ್ಕಿಸುವುದು ಸೂಕ್ತ.

ಬಹಳ ದಿನಗಳ ಕಾಲ ಈ ಸಮಸ್ಯೆ ಇದ್ದು, ಕಾರಣವಿಲ್ಲದೇ ಆತಂಕ ಪಡುತ್ತಿದ್ದರೆ ಮಾತ್ರ ಇದು ಮಾನಸಿಕ ಸಮಸ್ಯೆ ಎಂದು ನೆನಪಿಡಬೇಕು.

ಲಕ್ಷಣಗಳು

ಆತಂಕದ ಲಕ್ಷಣಗಳು ಸಾಮಾನ್ಯವಾಗಿ ಅಟ್ಯಾಕ್ ರೀತಿ ಸ್ವಲ್ಪ ಸಮಯ ಹೀಗೆ ಕಾಣಿಸಿಕೊಳ್ಳುತ್ತದೆ-

  • ವೇಗದ ಉಸಿರಾಟ ಮತ್ತು ಎದೆಬಡಿತ
  • ಎದೆ ಭಾಗದಲ್ಲಿ ಬಿಗಿತ
  • ನಡುಕ
  • ಕಾರಣ ಇಲ್ಲದೆ ಚಿಂತಿಸುವುದು

ಈ ಲಕ್ಷಣಗಳನ್ನು ತೋರುವ ವ್ಯಕ್ತಿ ನಿಮಗೆ ತಿಳಿದಿದ್ದರೆ ಅವರೊಂದಿಗೆ ಆತಂಕದ ಸಮಸ್ಯೆ ಬಗ್ಗೆ ಮಾತನಾಡಿ, ವೈದ್ಯರನ್ನು ಕಾಣಲು ಸೂಚಿಸಿ.

ಪರೀಕ್ಷೆ ಸಮಯದಲ್ಲಿ ಆತಂಕ

ಏರುತ್ತಿರುವ ಸ್ಪರ್ಧೆ ಮತ್ತು ನಿರೀಕ್ಷೆಗಳಿಂದಾಗಿ ಪರೀಕ್ಷೆಯು ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರುತ್ತಿವೆ. ಇದರ ಬಗ್ಗೆ ಹೆಚ್ಚು ಮಾಹಿತಿ ಇಲ್ಲಿ ಪಡೆಯಿರಿ.

ಆತಂಕ ಸಮಸ್ಯೆಯ ಲಕ್ಷಣ, ಸಹಾಯ ಇನ್ನಿತರ ಮಾಹಿತಿಯನ್ನು ಇಲ್ಲಿ ಪಡೆಯಿರಿ

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org