ಬಾಲ್ಯ

ಸೆರೆಬ್ರಲ್ ಪಾಲ್ಸಿ: ಮಿಥ್ಯೆ ಮತ್ತು ವಾಸ್ತವ

ವೈಟ್ ಸ್ವಾನ್ ಫೌಂಡೇಶನ್

ಮಿಥ್ಯೆ: ಸೆರೆಬ್ರಲ್ ಪಾಲ್ಸಿ ಹೊಂದಿರುವ ಮಕ್ಕಳು ಬುದ್ಧಿಮಾಂದ್ಯತೆಗೆ ತುತ್ತಾಗುತ್ತಾರೆ.

ವಾಸ್ತವ: ಸೆರೆಬ್ರಲ್ ಪಾಲ್ಸಿ ಹೊಂದಿರುವ ಅರ್ಧದಷ್ಟು (ಶೇ. 50ರಷ್ಟು) ಜನ ಮಾತ್ರ ಬುದ್ಧಿಮಾಂದ್ಯತೆಯನ್ನು ಕೂಡ ಹೊಂದಿರುತ್ತಾರೆ. ಪೂರಕವಾಗಿ, ಸೆರೆಬ್ರಲ್ ಪಾಲ್ಸಿ ಹೊಂದಿರುವ ಕೆಲವು ವ್ಯಕ್ತಿಗಳು ಸಾಕಷ್ಟು ಬುದ್ಧಿ ಹೊಂದಿರುತ್ತಾರೆ.

ಮಿಥ್ಯೆ: ಸೆರೆಬ್ರಲ್ ಪಾಲ್ಸಿ ಹೊಂದಿರುವ ಮಕ್ಕಳಿಗೆ ಸ್ಪಷ್ಟವಾಗಿ ಮಾತನಾಡಲು ಸಾಧ್ಯವಿಲ್ಲ ಅಥವಾ ಜನ ಏನು ಹೇಳುತ್ತಾರೆಂದು ಅರ್ಥೈಸಿಕೊಳ್ಳುವುದು ಹಾಗೂ ಸೂಚನೆಗಳನ್ನು ಪಾಲಿಸುವುದು ಸಾಧ್ಯವಿಲ್ಲ.

ವಾಸ್ತವ: ಸೆರೆಬ್ರಲ್ ಪಾಲ್ಸಿ ಹೊಂದಿರುವ ಮಕ್ಕಳು ಕೆಲವು ಸಲ ಸ್ಪಷ್ಟವಾಗಿ ಮಾತನಾಡುವುದಿಲ್ಲವಾದರೂ, ಬೇರೆಯವರು ಏನು ಹೇಳುತ್ತಾರೆ ಎಂಬುದನ್ನು ಅರ್ಥೈಸಿಕೊಳ್ಳತ್ತವೆ ಹಾಗೂ ಬುದ್ಧಿವಂತಿಕೆಯಿಂದ ಅದನ್ನು ಅನುಸರಿಸುತ್ತದೆ. ಸೆರೆಬ್ರಲ್ ಪಾಲ್ಸಿ ಹೊಂದಿರುವ ಹೆಚ್ಚಿನ ಮಕ್ಕಳು ತುಂಬಾ ಬುದ್ಧಿವಂತರಾಗಿರುತ್ತಾರೆ.

ಮಿಥ್ಯೆ: ಸೆರೆಬ್ರಲ್ ಪಾಲ್ಸಿ ಸಾಂಕ್ರಾಮಿಕ ಖಾಯಿಲೆ.

ವಾಸ್ತವ: ಸೆರೆಬ್ರಲ್ ಪಾಲ್ಸಿ ಸಾಂಕ್ರಾಮಿಕ ಖಾಯಿಲೆಯಲ್ಲ.

ಮಿಥ್ಯೆ:: ಸೆರೆಬ್ರಲ್ ಪಾಲ್ಸಿ ವಯಸ್ಕ ಜೀವನದಲ್ಲಿ ಮತ್ತೆ ಕಾಣಿಸಿಕೊಳ್ಳುವುದಿಲ್ಲ.

ವಾಸ್ತವ: ಸೋಂಕುಗಳ (ಮಿದುಳಿನ ಉರಿಯೂತ, ಮಿದುಳು ಜ್ವರ ಇತ್ಯಾದಿ) ಕಾರಣದಿಂದ ಅಥವಾ ತಲೆಗೆ ಸಂಭವಿಸುವ ತೀವ್ರಸ್ವರೂಪದ ಗಾಯಗಳಿಂದಾಗಿ ಸೆರೆಬ್ರಲ್ ಪಾಲ್ಸಿ ಬಾಲ್ಯ ಕಳೆದ ನಂತರವೂ ಕಾಣಿಸಿಕೊಳ್ಳಬಹುದು.

ಮಿಥ್ಯೆ: ಸೆರೆಬ್ರಲ್ ಪಾಲ್ಸಿ ಖಾಯಿಲೆಗೆ ಚಿಕಿತ್ಸೆ ನೀಡಬಹುದು/ಗುಣಪಡಿಸಬಹುದು.

ವಾಸ್ತವ: ಸೆರಬ್ರಲ್‌ ಪಾಲ್ಸಿ ಗುಣಪಡಿಸಲು ಆಗುವುದಿಲ್ಲ. ಏಕೆಂದರೆ ಮರುಸ್ಥಿತಿಗೆ ಹೋಗಲು ಸಾಧ್ಯವಾಗದ ಮಿದುಳಿನ ಗಾಯ ಈ ಖಾಯಿಲೆಗೆ ಕಾರಣವಾಗಿರುತ್ತದೆ. ಆದಾಗ್ಯೂ ಮೆದುಳಿನ ಹಾನಿಯ ಬಾಹ್ಯ ಪರಿಣಾಮಗಳನ್ನು ಗುಣಪಡಿಸಬಹುದು. ಅಸ್ವಸ್ಥತೆ ನಿರ್ವಹಣೆಗೆ ಇಲ್ಲಿ ಪ್ರಥಮಪ್ರಾಶಸ್ತ್ಯ. ತಜ್ಞರು ಚಿಕಿತ್ಸೆ ಮೂಲಕ ಮಗು ಹೆಚ್ಚಿನ ಸ್ವಾತಂತ್ರ್ಯ ಹೊಂದಲು ಹಾಗೂ ಸಾಧ್ಯವಾದಷ್ಟು ದಿನನಿತ್ಯದ ಚಟುವಟಿಕೆಗಳನ್ನು ಸ್ವಾವಲಂಬಿಯಾಗಿ ನಿರ್ವಹಿಸಲು ಸಹಾಯ ಮಾಡುತ್ತಾರೆ.

ಮಿಥ್ಯೆ: ಸೆರೆಬ್ರಲ್ ಪಾಲ್ಸಿ ಕ್ರಮೇಣ ಅವನತಿ ಹೊಂದುವ ಖಾಯಿಲೆ.

ವಾಸ್ತವ: ಸೆರೆಬ್ರಲ್ ಪಾಲ್ಸಿ ಆಕ್ರಮಣಶಾಲಿಯಲ್ಲದ, ಕ್ರಮೇಣ ಅವನತಿ ಹೊಂದದೇ ಇರುವ ಖಾಯಿಲೆ. ಸಮಯ ಕಳೆದಂತೆ ಮೆದುಳಿಗೆ ಉಂಟಾದ ಹಾನಿಯಲ್ಲಿ ಹೆಚ್ಚಳವಾಗುವುದಿಲ್ಲ. ಆದಾಗ್ಯೂ ರೋಗಲಕ್ಷಣಗಳು ನಿಧಾನವಾಗಿ ಗೋಚರಿಸಬಹುದು ಮತ್ತು ಮಗುವಿನ ಬೆಳವಣಿಗೆಯ ಗತಿಯಲ್ಲಿ ವಿಳಂಬ ಗೋಚರಿಸತೊಡಗಬಹುದು.

ಮಿಥ್ಯೆ: ಜನನದ ಸಮಯದಲ್ಲಿ ಉಂಟಾದ ಗಾಯ ಸೆರೆಬ್ರಲ್ ಪಾಲ್ಸಿ ಖಾಯಿಲೆಯನ್ನುಂಟುಮಾಡುತ್ತದೆ.

ವಾಸ್ತವ: ಹುಟ್ಟುವಾಗಿನ ಗಾಯ ಅಥವಾ ಮಗು ಹುಟ್ಟುವಾಗಿನ ದೋಷ ಸೆರೆಬ್ರಲ್ ಪಾಲ್ಸಿ ಖಾಯಿಲೆಗೆ ಕಾರಣವಾಗಬಹುದು. ಹೆರಿಗೆ ಅಥವಾ ಜನನದ ವೇಳೆ ನವಜಾತ ಶಿಶುವಿಗೆ ಆಮ್ಲಜನಕ ಕೊರತೆಯಾದರೆ ಮಿದುಳಿಗೆ ಹಾನಿಯಾಗುತ್ತದೆ. ತಾಯಿಯ ಭ್ರೂಣದಲ್ಲಿನ ಸೋಂಕು ಅಥವಾ ಅನುವಂಶೀಯ ನ್ಯೂನತೆಗಳು ಮುಂತಾದ ಕಾರಣಗಳಿಂದ ಜನನ ದೋಷ ತೊಂದರೆ ಕಾಣಿಸಿಕೊಳ್ಳುತ್ತದೆ. . ಜನನದ ಮೊದಲು ಅಥವಾ ಜನನ ಸಮಯದಲ್ಲಿ ಮಿದುಳಿನಲ್ಲಿ ಉಂಟಾಗುವ ಹಾನಿಯ ಪರಿಣಾಮವಾಗಿ ಕಾಗ್ನಿಟಲ್ ಸೆರೆಬ್ರಲ್ ಪಾಲ್ಸಿ ಖಾಯಿಲೆ ಉಂಟಾಗಬಹುದು.

ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org