ಕಲಿಯುವ ತೊಂದರೆಗಳು: ಕಲ್ಪನೆ ಮತ್ತು ವಾಸ್ತವ

ಕಲ್ಪನೆ: ಎಲ್ಲ ಕಲಿಯುವ ತೊಂದರೆಗಳೂ (learning disability - LD) ಒಂದೇ ಆಗಿರುತ್ತವೆ.

ವಾಸ್ತವ: ಡಿಸ್ಲೆಕ್ಸಿಯಾ, ಡಿಸ್ಗ್ರಾಫಿಯಾ, ಡಿಸ್ಕ್ಯಾಲ್ಕ್ಯುಲಿಯಾ ಮತ್ತು ಡಿಸ್ಪ್ರಾಕ್ಸಿಯಾ ಮುಂತಾದ ಖಾಯಿಲೆಗಳನ್ನು ಒಳಗೊಳ್ಳುವ ಕಲಿಕೆಯ ತೊಂದರೆಗಳು ಒಂದು ಸಂಕೀರ್ಣ ಪರಿಸ್ಥಿತಿಯಾಗಿರುತ್ತವೆ.

ಕಲ್ಪನೆ: ಕಲಿಕೆಯ ತೊಂದರೆಯಿಂದ ಬಳಲುವ ಮಕ್ಕಳು ಕಡಿಮೆ ಮಟ್ಟದಲ್ಲಿ ಐಕ್ಯೂ ಹೊಂದಿರುತ್ತಾರೆ.

ವಾಸ್ತವ: ಕಲಿಯುವ ತೊಂದರೆಯು ಒಂದು ನರವೈಜ್ಞಾನಿಕ ಸ್ಥಿತಿ. ಆದ್ದರಿಂದ ಇದು ಕಡಿಮೆ ಬುದ್ಧಿಮತ್ತೆಯ ಲಕ್ಷಣವಲ್ಲ. ವಾಸ್ತವಿಕವಾಗಿ, ಕಲಿಯುವ ತೊಂದರೆಗಳನ್ನು ಹೊಂದಿರುವ ಮಕ್ಕಳು ಸಾಮಾನ್ಯ ಅಥವಾ ಅದಕ್ಕಿಂತಲೂ ಹೆಚ್ಚಿನ ಬುದ್ಧಿಮತ್ತೆಯನ್ನು ಹೊಂದಿರುತ್ತಾರೆ.

ಕಲ್ಪನೆ: ಪ್ರೌಢವಯಸ್ಕರಾಗುತ್ತಿದ್ದಂತೆ ಎಲ್ಲ ಕಲಿಕೆಯ ತೊಂದರೆಗಳೂ ಗುಣವಾಗುತ್ತವೆ.

ವಾಸ್ತವ: ಕೆಲವೊಂದು ಕೆಲವು ಸಂದರ್ಭಗಳ ಹೊರತು, ಕಲಿಕೆಯ ತೊಂದರೆಗಳನ್ನು ಗುಣಪಡಿಪಡಿಸುವುದು ಕಷ್ಟ. ಹಾಗೆಂದ ಮಾತ್ರಕ್ಕೆ ಕಲಿಕೆಯ ತೊಂದರೆಗಳನ್ನು ಹೊಂದಿರುವ ಮಕ್ಕಳು ಜೀವನದಲ್ಲಿ ಯಶಸ್ವಿಯಾಗುವುದಿಲ್ಲ ಎಂದರ್ಥವಲ್ಲ. ಪಾಲಕರು ಹಾಗೂ ಪೋಷಕರ ಸೂಕ್ತ ಬೆಂಬಲ ಮತ್ತು ಸಹಾಯದಿಂದ ಮಕ್ಕಳು ತಮ್ಮ ಸ್ವಂತ ಶಕ್ತಿಯನ್ನು ಉಪಯೋಗಿಸಲು ಕಲಿತು ಜೀವನದಲ್ಲಿ ತಮ್ಮ ಗುರಿಗಳನ್ನು ಸಾಧಿಸಲು ಸಾಧ್ಯ.

ಕಲ್ಪನೆ: ಕಲಿಕೆಯ ತೊಂದರೆಗಳನ್ನು ಹೊಂದಿರುವ ಮಕ್ಕಳು ಆಲಸಿಗಳಾಗಿರುತ್ತಾರೆ.

ವಾಸ್ತವ: ಕಲಿಕೆಯ ತೊಂದರೆಗಳನ್ನು ಹೊಂದಿರುವ ಮಕ್ಕಳು ಶ್ರಮವಹಿಸಿ ಕೆಲಸ ಮಾಡುತ್ತಾರೆ ಆದರೂ ಅವರ ಪ್ರಯತ್ನಗಳು ನಿರೀಕ್ಷಿತ ಫಲಿತಾಂಶವನ್ನು ತರುವಲ್ಲಿ ಸೋಲುತ್ತವೆ. ಈ ಕಾರಣಕ್ಕಾಗಿ, ಮಕ್ಕಳು ಕಳೆಗುಂದಬಹುದು ಮತ್ತು ಆಲಸಿಗಳಂತೆ ತೋರಬಹುದು.

ಕಲ್ಪನೆ: ಕಲಿಕೆಯ ತೊಂದರೆಗಳು ಮತ್ತು ಎ.ಡಿ.ಎಚ್.ಡಿ (ADHD) ಒಟ್ಟಾಗಿ ಅಸ್ತಿತ್ವದಲ್ಲಿರುತ್ತವೆ.

ವಾಸ್ತವ: ಇದು ಸತ್ಯ. ಕಲಿಕೆಯ ತೊಂದರೆಗಳನ್ನು ಹೊಂದಿರುವ ಮೂರನೆಯ ಒಂದು ಭಾಗದಷ್ಟು ಮಕ್ಕಳು ಎ.ಡಿ.ಎಚ್.ಡಿಯನ್ನು ಸಹ ಹೊಂದಿರುತ್ತಾರೆ.

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org