ಮಕ್ಕಳ ಲೈಂಗಿಕ ಕಿರುಕುಳ ಎಂದರೇನು ?

ಈ ವ್ಯಾಖ್ಯಾನವು, ವಿಶ್ವ ಆರೋಗ್ಯ ಸಂಸ್ಥೆಯ, 1999ರ ಮಕ್ಕಳ ದೌರ್ಜನ್ಯ ತಡೆಗಟ್ಟುವಿಕೆ ಕುರಿತ ಸಮಾಲೋಚನೆಯ ಆಧಾರಿತವಾಗಿದೆ.

 • ಮಗುವಿಗೆ ಲೈಂಗಿಕೆ ಕ್ರಿಯೆ ಬಗ್ಗೆ ಗ್ರಹಿಸಲು ಸಾಧ್ಯವಾಗದೇ ಇದ್ದಾಗ ಅಥವಾ
 • ಪೂರ್ವ ಒಪ್ಪಿಗೆ ಇಲ್ಲದಿದ್ದರೆ ,
 • ಮಗುವಿನ ಶಾರೀರಿಕ ಬೆಳವಣಿಗೆ ಆಗದೇ ಇದ್ದಾಗ, ಅದನ್ನು ಲೈಂಗಿಕ ಕ್ರಿಯೆಗೆ ಒಳಪಡಿಸುವುದರೆ ಅಥವ ಈ ಕ್ರಿಯೆ ಕಾನೂನು ಬಾಹಿರ ಅಥವಾ ಸಾಮಾಜಿಕ ಬಾಹಿರವಾಗಿದ್ದರೆ, ಇದನ್ನು ಮಕ್ಕಳ ಲೈಂಗಿಕ ಕಿರುಕುಳ ಎನ್ನಲಾಗುವುದು.

 WHO ವೆಬ್ ಸೈಟ್ ನಲ್ಲಿ ಹೆಚ್ಚಿನ ಮಾಹಿತಿ ಪಡೆಯಿರಿ.http://www.who.int/violence_injury_prevention/resources/publications/en/guidelines_chap7.pdf

 ಮಗು ಲೈಂಗಿಕ ನಿಂದನೆಗೆ ಒಳಪಟ್ಟಿದೆ ಎಂದು ಗುರುತಿಸುವುದು ಹೇಗೆ?

ಲೈಂಗಿಕ ನಿಂದನೆಗೆ ಒಳಪಟ್ಟ ಮಕ್ಕಳಲ್ಲಿ, ಎರಡು ಅಥವಾ ಅದಕ್ಕಿಂತ ಹೆಚ್ಚಿನ ದೈಹಿಕ ಲಕ್ಷಣಗಳು/ ಕಾಣಿಸುತ್ತವೆ. ಅವು ಈ ರೀತಿ ಇವೆ.  

 • ದೇಹದ ಗೌಪ್ಯ ಭಾಗಗಳಲ್ಲಿ  ಗಾಯ ( ಮೊಲೆ/ಯೋನಿ/ ಗುದದ್ವಾರ)
 • ಮಲ/ ಮೂತ್ರ ವಿಸರ್ಜನೆ ಮಾಡುವಾಗ ನೋವು
 • ಯೋನಿ ಸ್ರಾವ
 • ( ರಕ್ತ/ ಬಿಳಿಸ್ರಾವ )
 • ಹೊಟ್ಟೆ ನೋವು
 • ಲೈಂಗಿಕ ಸೋಂಕುಗಳು/ ಎಚ್ ಐ ವಿ
 • ಮರುಕಳಿಸುವ ಮೂತ್ರನಾಳದ ಸೋಂಕು
 • ಗರ್ಭಧಾರಣೆ

ಮಗು ಲೈಂಗಿಕ ಕಿರುಕುಳಕ್ಕೆ ಒಳಪಟ್ಟಾಗ ನಡವಳಿಕೆ/ವರ್ತನೆಯಲ್ಲಿ ಆಗುವ ವ್ಯತ್ಯಾಸ

ಲೈಂಗಿಕ ಕಿರುಕುಳಕ್ಕೆ ಒಳಗಾದ ಮಕ್ಕಳ ವರ್ತನೆಯಲ್ಲಿ ಬದಲಾವಣೆ ಇರುತ್ತದೆ ಮತ್ತುಕೆಲವು ಲಕ್ಷಣಗಳನ್ನು ತೋರಿಸುತ್ತಾರೆ.

 • ವಯಸ್ಸಿಗೆ ಉಚಿತವಲ್ಲದ/ ಅನುಚಿತ ಲೈಂಗಿಕ ತಿಳುವಳಿಕೆ
 • ವಿದ್ಯಾಭ್ಯಾಸದಲ್ಲಿ ವ್ಯತ್ಯಾಸ
 • ಬೆಡ್ ವೆಟ್ಟಿಂಗ್
 • ಕೆಲವು ಸ್ಥಳ ಅಥವಾ ವ್ಯಕ್ತಿಗಳನ್ನು ಕಂಡಾಗ ಭಯ/ ಆತಂಕ ಅಥವಾ ಇಷ್ಟವಾಗದೇ ಇರುವುದು
 • ಹಸಿವಿನಲ್ಲಿ ವ್ಯತ್ಯಾಸ
 • ಎಲ್ಲರೊಂದಿಗೆ ಬೆರೆಯಲು ಹಿಂಜರಿಕೆ ಅಥವಾ ಒಂಟಿಯಾಗಿರಲು ಬಯಸುವುದು
 • ಹೆಚ್ಚಾಗಿ ಸ್ನಾನ ಮಾಡುವುದು ಅಥವ ಸ್ವಚ್ಛ ಮಾಡಿಕೊಳ್ಳುವುದು
 • ನಿದ್ರಾ ಹೀನತೆ, ದುಸ್ವಪ್ನ (ನೈಟ್ ಮೇರ್ಸ್)
 • ಸ್ವಯಂ ಹಾನಿ ಮಾಡಿಕೊಳ್ಳುವ ಪ್ರಯತ್ನ
 • ಆತಂಕ/ ಖಿನ್ನತೆ

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org